Awards: ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಮೊತ್ತ ಪರಿಷ್ಕಾರ: ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ
ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರವು ನೀಡುತ್ತಿದ್ದ ನಗದು ಮೊತ್ತವನ್ನು ಪರಿಷ್ಕರಿಸಲಾಗಿದೆ.
👉 ಪರಮವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 25 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 1.5 ಕೋಟಿಗೆ ಹೆಚ್ಚಿಸಲಾಗಿದೆ.
👉 ಮಹಾವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 12 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹ 1 ಕೋಟಿಗೆ ಹೆಚ್ಚಿಸಲಾಗಿದೆ.
👉 ಅಶೋಕ ಚಕ್ರ ಪುರಸ್ಕೃತರಿಗೆ ₹ 25 ಲಕ್ಷದಿಂದ ₹ 1.5 ಕೋಟಿ,ಕೀರ್ತಿ ಚಕ್ರ ಪುರಸ್ಕೃತರಿಗೆ ಈ ಮೊದಲು ₹12 ಲಕ್ಷ ನೀಡಲಾಗುತ್ತಿತ್ತು. ಅದನ್ನು ಈಗ ₹ 1 ಕೋಟಿಗೆ ಹೆಚ್ಚಿಸಲಾಗಿದೆ.
👉 ವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 8 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
👉 ಶರ್ಯ ಚಕ್ರ ಪುರಸ್ಕೃತರಿಗೆ ನೀಡುತ್ತಿದ್ದ ಮೊತ್ತವನ್ನು ₹ 8 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
👉 ಸೇನಾ ಮೆಡಲ್ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ಪುರಸ್ಕಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು ಈಗ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.
👉 ಮನ್ ಷನ್ ಎನ್ ಡಿಸ್ಪ್ಯಾಚ್ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.