KPTCL Recruitment Apply Online for Junior Power Man & Junior Station Attendant 2542 Posts KPTCL ನೇಮಕಾತಿ ಜೂನಿಯರ್ ಪವರ್ ಮ್ಯಾನ್ ಮತ್ತು ಜೂನಿಯರ್ ಸ್ಟೇಷನ್ ಅಟೆಂಡೆಂಟ್ 2542 ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

By Gagan B

Updated On:

Last Date: 2024-11-20

KPTCL Recruitment Apply Online for Junior Power Man & Junior Station Attendant 2542 Posts KPTCL ನೇಮಕಾತಿ ಜೂನಿಯರ್ ಪವರ್ ಮ್ಯಾನ್ ಮತ್ತು ಜೂನಿಯರ್ ಸ್ಟೇಷನ್ ಅಟೆಂಡೆಂಟ್ 2542 ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

KPTCL Recruitment Apply Online for Junior Power Man & Junior Station Attendant 2542 Posts

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ 411 (380 + 31 ಬ್ಯಾಕ್‌ಲಾಗ್) ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 (75 + 6 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2268 (1818 + 450 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅಗತ್ಯ ವಿದ್ಯಾರ್ಹತೆ:

ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಮೇಲೆ ತಿಳಿಸಿರುವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ಸೂಚನೆ:

  • 1) ಮೇಲೆ ತಿಳಿಸಲಾದ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆಯನ್ನು (Equivalent Qualification) ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
  • ii) ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆಯನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
  • iii) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರತಕ್ಕದ್ದು.
  • iv) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
  • v) ಈ ಅಧಿಸೂಚನೆಯನ್ವಯ ನೇಮಕಾತಿಗೆ ಪರಿಗಣಿಸಬೇಕಾಗುವ ವಿದ್ಯಾರ್ಹತೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕವಿಪ್ರನಿನಿ/ಎಸ್ಕಾಂಗಳು ಮಾತ್ರ ಹೊಂದಿರುತ್ತದೆ ಹಾಗೂ ಅಭ್ಯರ್ಥಿಗಳು ಅದಕ್ಕೆ ಬದ್ಧರಾಗಿರತಕ್ಕದ್ದು.

ಇತರೆ ಅರ್ಹತೆಗಳು:

i) ಕನ್ನಡದಲ್ಲಿ ಓದುವ ಮತ್ತು ಬರೆಯುವ ಜ್ಞಾನ ಹೊಂದಿರತಕ್ಕದ್ದು.

ii) ತೃಪ್ತಿಕರವಾದ ನೇತ್ರದೃಷ್ಟಿಯನ್ನು ಹೊಂದಿರತಕ್ಕದ್ದು.

iii) ತೃಪ್ತಿಕರ ದೇಹದಾರ್ಡ್ಯವನ್ನು ಹೊಂದಿರತಕ್ಕದ್ದು. ಕಠಿಣ ಕೆಲಸಗಳಾದ ಗುಂಡಿ ತೆಗೆಯುವುದು, ಗೋಪುರ ಅಥವಾ ಕಂಬ ಹತ್ತುವುದು, ಭಾರವಾದ ವಸ್ತುಗಳನ್ನು ಸಾಗಿಸುವುದು, ತಂತಿಗಳನ್ನು ಆಳವಡಿಸುವುದು, ಕಂಬಗಳನ್ನು ಬದಲಾಯಿಸುವುದು, ಇತ್ಯಾದಿ ಕೆಲಸಕಾರ್ಯಗಳನ್ನು ನಿರ್ವಹಿಸಲು ಶಕ್ತರಿರಬೇಕು ಮತ್ತು ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಬೇಕು. ಈ ಮೇಲೆ ತಿಳಿಸಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಎಲ್ಲಾ ರೀತಿಯಲ್ಲಿಯೂ ದೈಹಿಕವಾಗಿ ಸಾಮರ್ಥ್ಯ ಹೊಂದಿರತಕ್ಕದ್ದು.

ಹುದ್ದೆಗಳ ಭರ್ತಿ:

i) ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು, ಇವುಗಳಲ್ಲಿ

ಯಾವುದಾದರೂ ಒಂದು ಕಂಪನಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ii) ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ, ಕೊನೆಯದಾಗಿ ಸಲ್ಲಿಸಿರುವ ಅರ್ಹ ಅರ್ಜಿಯನ್ನು

Telegram Group Join Now
WhatsApp Group Join Now

ಮಾತ್ರ ಪರಿಗಣಿಸಲಾಗುವುದು. ಇನ್ನುಳಿದ ಅರ್ಜಿಗಳೊಂದಿಗೆ ಸಲ್ಲಿಸಿರುವ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ

ಹಿಂಪಾವತಿಸಲಾಗುವುದಿಲ್ಲ.

iii) ಕಿರಿಯ ಸ್ಟೇಷನ್ ಪರಿಚಾರಕ ಅಥವಾ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ, ‘ಬ್ಯಾಕ್‌ಲಾಗ್ ಹುದ್ದೆಗಳಿಗೆ’

ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಆಯ್ಕೆಯ ವಿಧಾನ:

‘ಸಹನ ಶಕ್ತಿ ಪರೀಕ್ಷೆ’ಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು, ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯ ಪರೀಕ್ಷೆಯ ವಿದ್ಯಾರ್ಹತೆಯಲ್ಲಿ ಗಳಿಸಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದ ಮೇಲೆ ಕರ್ನಾಟಕ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ, ಆಯ್ಕೆ ಮಾಡಲಾಗುವುದು.

ಸಹನ ಶಕ್ತಿ ಪರೀಕ್ಷೆಗೆ ಈ ಕೆಳಗಿನ ಸ್ಪರ್ಧೆಗಳನ್ನು ನಿಗದಿಪಡಿಸಲಾಗಿದೆ.

ವಿದ್ಯುತ್ ಕಂಬ ಹತ್ತುವುದು : 8 ಮೀಟರ್ ಎತ್ತರ (ಕಡ್ಡಾಯ)

100 ಮೀಟರ್ ಓಟ: 14 ಸೆಕೆಂಡ್‌ಗಳು

ಶಾಟ್‌ ಫುಟ್ (12 ಪೌಂಡ್‌ ಗಳು) : 8 ಮೀಟರ್ ಎಸೆತ ಮೂರು ಅವಕಾಶಗಳು

800 ಮೀಟರ್ ಓಟ: 3 ನಿಮಿಷಗಳು

ವಿಶೇಷ ಸೂಚನೆ:

  1. ಸಹನ ಶಕ್ತಿ ಪರೀಕ್ಷೆಯನ್ನು ಕವಿಪ್ರನಿನಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವುದು. ಸಹನ ಶಕ್ತಿ ಪರೀಕ್ಷೆಯನ್ನು ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ಆಯಾ ಕಂಪನಿಯ ವ್ಯಾಪ್ತಿಯಲ್ಲಿ ನಡೆಸಲಾಗುವುದು.
  2. ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಂದೇ ಸಹನ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಸದರಿ ಸಹನ ಶಕ್ತಿ ಪರೀಕ್ಷೆಯ ಫಲಿತಾಂಶವನ್ನು ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಲಾಗುವುದು.
  3. ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಕೆಲಸ ಕಾರ್ಯಗಳು ಕಠಿಣ ಹಾಗೂ ಅಪಾಯಕಾರಿಯಾಗಿದ್ದು, ಸದರಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಪರಸ್ಪರ ಸಂವಹನವು (Communication) ಅತ್ಯಾವಶ್ಯಕವಾಗಿರುತ್ತದೆ. ಆದ್ದರಿಂದ ಅಂಗವಿಕಲ ಕೋಟಾದಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾತನಾಡುವ ಸಾಮರ್ಥ್ಯ ಹೊಂದಿರತಕ್ಕದ್ದು,

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಯು ಈ ಕನಿಷ್ಠ ಹಾಗೂ ಗರಿಷ್ಠ ವಯೋಮಿತಿಯನ್ನು ಹೊಂದಿರಬೇಕು:

  • ಕನಿಷ್ಠ ವಯೋಮಿತಿ (ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ): 18 ವರ್ಷಗಳು
  • ಗರಿಷ್ಠ ವಯೋಮಿತಿ (ಸಾಮಾನ್ಯ ವರ್ಗದ ಅಭ್ಯರ್ಥಿಗಳು): 35 ವರ್ಷಗಳು
  • ಗರಿಷ್ಠ ವಯೋಮಿತಿ (ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಗೆ ಸೇರಿದ ಅಭ್ಯರ್ಥಿಗಳು): 38 ವರ್ಷಗಳು
  • ಗರಿಷ್ಠ ವಯೋಮಿತಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು): 40 ವರ್ಷಗಳು

ವಯೋಮಿತಿ ಸಡಿಲಿಕೆಗಳು:

  • ನೇಮಕಾತಿಯ ಗರಿಷ್ಠ ವಯೋಮಿತಿಗೆ ಈ ಕೆಳಗಿನ ಸಂದರ್ಭಗಳಲ್ಲಿ ಸಡಿಲಿಕೆಗಳು ಲಭ್ಯವಿದೆ, ಅದರಮಟ್ಟಿಗೆ ಹೆಚ್ಚಿಸಲಾಗುವುದು.

ಅರ್ಜಿ ಶುಲ್ಕ ಪಾವತಿ ವಿಚಾರಣೆಗಾಗಿ:

ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿರುವ ಬಗ್ಗೆ www.karnatakapost.gov.in ನಲ್ಲಿ ಅರ್ಜಿ ಶುಲ್ಕ ಪಾವತಿಸಿದ 48

ಗಂಟೆಗಳ ನಂತರ ದೃಢಪಡಿಸಿಕೊಳ್ಳಬಹುದಾಗಿದೆ. ಪಾವತಿ ಸಂದರ್ಭದಲ್ಲಿ ಯಾವುದೇ ಸ್ಪಷ್ಟಿಕರಣಕ್ಕಾಗಿ ಅಭ್ಯರ್ಥಿಗಳು ಅಂಚೆ ಕಚೇರಿ ಸಹಾಯವಾಣಿ ದೂರವಾಣಿ ಸಂಖ್ಯೆ: 080-22392668 (ಸೋಮವಾರದಿಂದ ಶುಕ್ರವಾರದವರೆಗೆ, ಸಮಯ ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ) ಸಂಪರ್ಕಿಸುವುದು.

ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಯ ಕೆಲಸ ಮತ್ತು ಜವಾಬ್ದಾರಿಗಳು:

1) ವಿದ್ಯುತ್‌ ಗೋಪುರ ಹಾಗೂ ಕಂಬಗಳನ್ನು ಹತ್ತುವುದು, ವಿದ್ಯುತ್ ಕಂಬಗಳ ನೆಡುವಿಕೆ, ಗುಂಡಿಗಳ ಅಗೆಯುವಿಕೆ, ಕಂಬಗಳ ಮತ್ತು ಪೂರಕ ಸಾಮಗ್ರಿಗಳನ್ನು ಹೊರುವುದು, ಸ್ಟೇಷನ್‌ ಸ್ವಚ್ಛತೆ, ಕ್ಲೀನಿಂಗ್ ಯಾರ್ಡ್‌ನಲ್ಲಿರುವ ಕೇಬಲ್ ಉಪಕರಣಗಳ ಸ್ವಚ್ಛತೆ, ಟ್ರಾನ್ಸ್‌ ಫಾರ್ಮರ್/ಸ್ಟೇಷನ್ ಆವರಣದಲ್ಲಿರುವ ಹುಲ್ಲುಗಳನ್ನು ಕತ್ತರಿಸುವುದು, ಜಿ.ಓ.ಎಸ್. ಕಾರ್ಯನಿರ್ವಹಣೆ, ಸೂಚನೆಯ ಮೇರೆಗೆ ಸಂಪರ್ಕ ಕಡಿತಗೊಳಿಸುವಿಕೆ, ಗೌಂಡ್ ಪಿಟ್ಗೆ ನೀರು ಹಾಯಿಸುವುದು, ಸ್ಟೇಷನ್‌ನ ಕಾರ್ಯನಿರ್ವಹಣೆಯ ಬಗ್ಗೆ ಪಾಳಿ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿಗಳಿಗೆ ಸಹಾಯ ಮಾಡುವುದು, ಅವಶ್ಯವಿದ್ದಲ್ಲಿ ಸಾಮಾನ್ಯ ಭಾರದ ವಸ್ತುಗಳನ್ನು ಹೊರುವುದು, ಟಿಡಿಪಿ ಸಾಮಗ್ರಿಗಳ ನಿರ್ವಹಣೆ ಅಲ್ಲದೇ ಶಾಖೆಯ ಮುಖ್ಯಸ್ಥರು ನಿಗಮದ ಹಿತದೃಷ್ಟಿಯಿಂದ ವಹಿಸುವ ಇತರೆ ಯಾವುದೇ ಕೆಲಸಗಳನ್ನು ನಿರ್ವಹಿಸುವುದು.

ii) ಅಗತ್ಯ ಇರುವ ಸ್ಥಳಗಳಲ್ಲಿ ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸುವುದು.

ಕಿರಿಯ ಪವರ್‌ಮ್ಯಾನ್ ಹುದ್ದೆಯ ಕೆಲಸ ಮತ್ತು ಜವಾಬ್ದಾರಿಗಳು:

1) ವಿದ್ಯುತ್ ಕಂಬಗಳ ನೆಡುವಿಕೆ, ಗುಂಡಿಗಳ ಅಗೆಯುವಿಕೆ, ಕಂಬಗಳ ಮತ್ತು ಪೂರಕ ಸಾಮಗ್ರಿಗಳನ್ನು ಹೊರುವುದು, ವಿದ್ಯುತ್ ಮಾರ್ಗಗಳ ತಪಾಸಣೆ, ಮಾರ್ಗಗಳ ನಿರ್ವಹಣೆಗಾಗಿ ಕಂಬಗಳನ್ನು ಹತ್ತಿ ಕಾರ್ಯನಿರ್ವಹಿಸುವುದು, ಸಾಧನ ಸಲಕರಣೆ ಮತ್ತು ಸ್ಥಾವರಗಳ ಸ್ವಚ್ಛತೆ, ಪವ‌ರ್ಮ್ಯಾನ್/ಸಹಾಯಕ ಪವರ್‌ಮ್ಯಾನ್ ರವರುಗಳು ನಿರ್ವಹಿಸುವ ಮಾರ್ಗಗಳ ನಿರ್ವಹಣೆ ಕಾರ್ಯದಲ್ಲಿ ಸಹಾಯ ಮಾಡುವುದು, ಪ್ಯೂಸ್ ಆಫ್ ಕಾಲ್ ಮತ್ತು ದೋಷಗಳನ್ನು ಕಂಡುಹಿಡಿದು ಸರಿಪಡಿಸುವುದು, ನಿರ್ವಹಣೆ, ಬ್ರೇಕ್‌ಡೌನ್ ಕಾರ್ಯಗಳಲ್ಲಿ ಹಾಜರಿದ್ದು ಸಹಾಯ ಮಾಡುವುದು ಮತ್ತು ರಿಲೇ ಟೆಸ್ಟಿಂಗ್ ವಿಭಾಗದ ಕೆಲಸ ಕಾರ್ಯಗಳಲ್ಲೂ ಸಹಾಯ ಮಾಡುವುದು. ಕ್ಯಾಂಪ್‌ಗಳಲ್ಲಿ ಕಾರ್ಯನಿರ್ವಹಿಸುವುದು ಹಾಗೂ ಪೂರಕ ದಾಖಲೆಗಳನ್ನು ನಿರ್ವಹಿಸುವುದು, ಅಲ್ಲದೇ, ಶಾಖೆಯ ಮುಖ್ಯಸ್ಥರು ನಿಗಮ/ಕಂಪನಿಯ ಹಿತದೃಷ್ಟಿಯಿಂದ ವಹಿಸುವ ಯಾವುದೇ ಕೆಲಸಗಳನ್ನು ನಿರ್ವಹಿಸುವುದು.

ii) ಅಗತ್ಯ ಇರುವ ಸ್ಥಳಗಳಲ್ಲಿ ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸುವುದು.

ಅರ್ಜಿ ಸಲ್ಲಿಸುವ ವಿಧಾನ:

i) ಅರ್ಜಿಯನ್ನು ಕಡ್ಡಾಯವಾಗಿ ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಗೆ ತಿಳಿಸಿರುವ ಯಾವುದಾದರೊಂದು ವೆಬ್-ಸೈಟ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಇತರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

https://kptcl.karnataka.gov.in

https://bescom.karnataka.gov.in

https://cescmysore.karnataka.gov.in

https://mescom.karnataka.gov.in

https://hescom.kamataka.gov.in

https://gescom.karnataka.gov.in

SHORT NOTIFICATIONCLICK HERE
DETAILED NOTIFICATION – NKKCLICK HERE
DETAILED NOTIFICATION – KKCLICK HERE
APPLY ONLINECLICK HERE

ii) ಅಭ್ಯರ್ಥಿಗಳು ಅರ್ಜಿಯನ್ನು ‘ಆನ್‌ಲೈನ್ ಮುಖಾಂತರ ದಿನಾಂಕ: 21.10.2024 ರಿಂದ 20.11.2024 ರವರೆಗೆ ಸಲ್ಲಿಸಬಹುದಾಗಿರುತ್ತದೆ.

iii) ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಅಭ್ಯರ್ಥಿಗಳು ವೆಬ್‌ಸೈಟ್ ನಲ್ಲಿ ಲಭ್ಯವಿರುವ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.

iv) ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶವಿರುವುದಿಲ್ಲ. v) ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ತಮ್ಮ ಭಾವಚಿತ್ರ ಮತ್ತು ಸಹಿಯನ್ನು ಹೊರತುಪಡಿಸಿ, ಇನ್ಯಾವುದೇ

ಭಾವಚಿತ್ರ/ಸಹಿಯನ್ನು Upload ಮಾಡಿದ್ದಲ್ಲಿ, ಅಂತಹ ಅರ್ಜಿಗಳನ್ನು ಯಾವುದೇ ಸೂಚನೆ ನೀಡದೆ

ತಿರಸ್ಕರಿಸಲಾಗುವುದು.

vi) ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

vii) ಅರ್ಜಿ ಶುಲ್ಕದ ಚಲನ್ ಅನ್ನು ಕವಿಪ್ರನಿನಿ ಮತ್ತು ಆಯಾ ಕಂಪನಿಯ ವೆಬ್ ಸೈಟ್ ನಿಂದ ಡೌನ್‌ ಲೋಡ್ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದಾದರೂ ಅಂಚೆ ಕಚೇರಿಯ ಮುಖಾಂತರ ಪಾವತಿಸಬೇಕಿರುತ್ತದೆ. ಅರ್ಜಿ ಶುಲ್ಕದ ಜೊತೆಗೆ ರೂ.24/- (ಜಿ.ಎಸ್.ಟಿ. ಸೇರಿಸಿ) ನ್ನು ಅಂಚೆ ಕಚೇರಿಯ ಸೇವಾ ಶುಲ್ಕವಾಗಿ ಪಾವತಿಸತಕ್ಕದ್ದು.

viii) ಅರ್ಜಿ ಶುಲ್ಕವನ್ನು, ದಿನಾಂಕ: 21.10.2024 ರಿಂದ ದಿನಾಂಕ: 25.11.2024 ರವರೆಗೆ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿರುವ ಯಾವುದಾದರೂ ಗಣಕೀಕೃತ ಅಂಚೆ ಕಚೇರಿಯಲ್ಲಿನ ವ್ಯವಹಾರದ ವೇಳೆಯಲ್ಲಿ ಪಾವತಿಸುತಕ್ಕದ್ದು.

ix) ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ ಅಥವಾ ಯಾವುದೇ ನೇಮಕಾತಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.

x) ಅರ್ಜಿ ಶುಲ್ಕ ಪಾವತಿಯು ಖಚಿತಗೊಂಡ ನಂತರವೇ ಅರ್ಜಿದಾರರು ತಾವು ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಗಳನ್ನು ‘ಆನ್-ಲೈನ್’ ಮೂಲಕ ಪಡೆಯಲು ಅವಕಾಶವಿರುತ್ತದೆ.

xi) ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ವಿಳಂಬ ಮಾಡದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸುವುದು.

xii) ‘ಆನ್-ಲೈನ್’ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಉಂಟಾದಲ್ಲಿ ಮತ್ತು ಇತರೆ ಸ್ಪಷ್ಟಿಕರಣಕ್ಕಾಗಿ ಈ ಕೆಳಕಂಡ ಸಂಬಂಧಪಟ್ಟ ಆಯಾ ಕಂಪನಿಯ ಸಹಾಯವಾಣಿಗೆ (HELP LINE) ಬೆಳಿಗ್ಗೆ 10:30 ರಿಂದ ಸಂಜೆ 5:00 ಗಂಟೆಯವರೆಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯುವುದು:-

HELP LINE

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ

: 080-22211527 EXT: 3872

: 080-22258788

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ : 0821-2343384 : 0824-2885759

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ : 0836-2223865, 0836-2223867

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ : 08472-256647, 08472-239004

Gagan B

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
Best Wordpress Adblock Detecting Plugin | CHP Adblock
WhatsApp

ಉಚಿತ ಉದ್ಯೋಗ ಮಾಹಿತಿ

ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಜಾಯಿನ್ ಆಗಿ. ಧನ್ಯವಾದಗಳು

Powered by Spardhanews.com